Home
PDF Print E-mail
ಡಾ|| ರಾಜ್ ಸವಿನೆನಪಿಗಾಗಿ ದಿನಾಂಕ ೬ ಆಗಸ್ಟ್ ೨೦೦೬ ರಂದು ಭಾನುವಾರ ಸಂಜೆ ೪:೦೦ಕ್ಕೆ ನಗರದ ರವೀಂದ್ರ ಕಲಾಕ್ಶೇತ್ರ ದಲ್ಲಿ "ನಾದಮಯ ಈ ಲೋಕವೆಲ್ಲ" ಎಂಬ ರಸಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಶತೆಯನ್ನು ಡಾ|| ಚಂದಶೇಖರ ಕಂಬಾರ ರವರು ವಹಿಸಿದ್ದರು. ಹಿರಿಯ ಚಲನಚಿತ್ರ ನಟರೂ ಆದಂತಹ ಶ್ರೀ ಕೆ.ಎಸ್. ಅಶ್ವಥ್ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಜೊತೆಗೆ ಡಾ|| ರಾಜ್ ಕುಟುಂಬದಿಂದ ಶ್ರೀ ರಾಘವೇಂದ್ರ ರಾಜಕುಮಾರ್ ರವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಿರಿಯ ಚಲನ ಚಿತ್ರ ನಿರ್ಮಾಪಕರಾದ ಶ್ರೀ ಕೆ.ಸಿ.ಎನ್ ಗೌಡರು, ಹಾಯ್ ಬೆಂಗ್ಳೂರು ಪತ್ರಿಕೆಯ ಶ್ರೀ ರವಿ ಬೆಳೆಗೆರೆ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಶ್ರೀ ಜಿ. ಕಪ್ಪಣ್ಣ, ಸಾಹಿತಿ ಡಾ|| ನಲ್ಲೂರು ಪ್ರಸಾದ್ ಮತ್ತು ಉದಯೋನ್ಮುಖ ಯುವ ನಟ ಶ್ರೀ ವಿಜಯ ರಾಘವೇಂದ್ರ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಈ ಟೀವಿ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಹೆಸರು ಪಡೆದ ಶ್ರೀ ಎನ್.ಆರ್ ವಿನಯ್ ಕುಮಾರ್, ರವಿ ಮುರೂರ್, ಶೇಷ ಪ್ರಸಾದ್, ಸಿದ್ದರಾಮ್ ಸಾಣೆಹಳ್ಳಿ, ಡಾ|| ಸುಹಾಸ್, ಜಗದೀಶ ಕೆ.ಟಿ, ವಿಶ್ವಾಸ್, ನಚಿಕೇತ, ಸುಪ್ರಿಯಾ ಆಚಾರ್ಯ, ಸುಶ್ಮಾ ಪ್ರಕಾಶ್, ಸಿಂಚನ್ ದೀಕ್ಷಿತ್, ಡಾ|| ಅರ್ಚನ ಮತ್ತು ಮಾಸ್ಟರ್ ಮನೋಜ್ ಆದಿಯಾಗಿ ಡಾ|| ರಾಜ್ ಚಿತ್ರಗಳಿಂದ ಆಯ್ದ ಗೀತೆಗಳನ್ನು ಹಾಡಿ ಸಭೀಕರನ್ನು ಬೇರೊಂದು ಲೋಕಕ್ಕೆ ಕರೆದೊಯ್ದರು. ವಾದ್ಯ ಸಂಯೋಜನೆ ಗಿಟಾರ್ ಶ್ರೀನಿವಾಸ್ ರವರದ್ದಾಗಿತ್ತು. ಕೀಬೋರ್ಡ್ - ನಾಗರಾಜ್, ಸಂಗೀತ್ ಥಾಮಸ್, ತಬಲ - ಸತ್ಯಮೂರ್ತಿ, ಕುಲಕರ್ಣಿ, ಬೇಸ್ ಗಿಟಾರ್ - ಕ್ಯಾಲಿಬ್ ಅಲೆಕ್ಸಾಂಡರ್, ರಿದಮ್ ಪ್ಯಾಡ್ - ಜೆರಾಲ್ಡ್, ದೋಲಕ್ - ರವಿಕುಮಾರ್ (ಟಿಪ್ಪಿ) ಪಕ್ಕ ವಾದ್ಯ ನುಡಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಕೆ.ಎಸ್. ಅಶ್ವಥ್ ರವನ್ನು ಸನ್ಮಾನಿಸಿಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ನಂದ ಮತ್ತು ಡಾ|| ಅರ್ಚನ ಮಾಡಿದರು. ಶ್ರೀ ಸಂಪಿಗೆ ಶ್ರೀನಿವಾಸ್ ರವರು ಕಾರ್ಯಕ್ರಮದಲ್ಲಿ ಅವಿರತದ ಪ್ರಸಕ್ತ ಸಾಲಿನ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲಿದರು.